ಕೋಗಿಲೆ ಹಾಡಿದೆ ಕೇಳಿದೆಯಾ
ಸಮಯದ ಬೊಂಬೆ ಡಾ|| ರಾಜ್ ಕುಮಾರ್
ಚಿ. ಉದಯಶಂಕರ್
ಎಂ. ರಂಗರಾವ್
ಕೋಗಿಲೆ ಹಾಡಿದೆ ಕೇಳಿದೆಯಾ
ಹೊಸರಾಗವ ಹಾಡಿದೆ ಆಲಿಸೆಯಾ
ಹೊಸ ಹೊಸ ಭಾವ ಕುಣಿಸುತ ಜೀವ
ಮರೆ ಸುತ ನೋವಾ ಪ್ರೇಮವಾ ತುಂಬಿ || ಕೋಗಿಲೆ ||
ಅಮ್ಮನು ಕಂದನ ಕೂಗುವ ಹಾಗೆ
ತಂಗಿಯು ಅಣ್ಣನ ಹುಡುಕುವ ಹಾಗೆ
ಪ್ರೀತಿಯ ಚಿಲುಮೆ ಉಕ್ಕುವ ಹಾಗೆ
ಕಾತರದಿಂದ ಪಂಚಮ ಸ್ವರದಿ
ಕೊಳಲಿಂದ ಹೊರ ಬಂದ ಸಂಗೀತದಂತೆ || ಕೋಗಿಲೆ ||
ಆಹಾ... ಆ... ಆ... ಆ... ಆ..ಆ...ಆ.....
ಕಾಣದ ಸಿರಿಯಾ ನೋಡಿದ ಹಾಗೆ
ದೊರಕದ ಮಾಣಿಕ್ಯ ದೊರಕಿದ ಹಾಗೆ
ಬಾಳಲಿ ಬೆಳಕು ಮೂಡಿದ ಹಾಗೆ
ಸಡಗರ ಬದುಕಲಿ ತುಂಬುವ ಹಾಗೆ
ಸವಿಯಾಗಿ ಇಂಪಾಗಿ ಆನಂದದಿಂದ || ಕೋಗಿಲೆ ||
ಕಂಗಳು ಕನಸು ಕಾಣುವ ಹಾಗೆ
ತಿಂಗಳ ಬೆಳಕು ಮೂಡಿದ ಹಾಗೆ
ಹೃದಯದ ನೈದಿಲೆ ಅರಳಿದ ಹಾಗೆ
ನೋವೋ ನಲಿವೋ ತಿಳಿಯದ ಹಾಗೆ
ಸಂಗೀತ ಸುಧೆಯಿಂದ ಸುಖ ನೀಡುವಂತೆ || ಕೋಗಿಲೆ ||
ಸಮಯದ ಬೊಂಬೆ
ಚಿತ್ರ ನೋಡಿ